== 'ಮರ್ಮೇಡ್, ಕಥಾಪ್ರಸಂಗ' == 'ಮರ್ಮೇಡ್ ಗಳ ಕಥೆ,' ಗಳನ್ನು ಮಕ್ಕಳು ಆಸಕ್ತಿಯಿಂದ ಆಲಿಸುತ್ತಾರೆ. ದೊಡ್ಡವರಿಗೆ ಈ ಕಥೆಗಳು ಇಂದು ಅಪ್ರಸ್ತುತವೆನ್ನಿಸುತ್ತದೆ. ಆದರೆ ಸಮುದ್ರಯಾನ, ಇನ್ನೂ ಗರಿಕೆದರದ ಅವಸ್ಥೆಯಲ್ಲಿದ್ದಾಗ, ನಾವಿಕರು, ಕಂಡದ್ದು, ಕೇಳಿದ್ದು ಅಥವಾ ಹೇಳಿದ್ದೆಲ್ಲಾ ವೇದವಾಕ್ಯಗಳೇ ಆಗಿದ್ದವು .'ಮರ್ಮೇಡ್,' ಗಳ ಬಗ್ಗೆ ಅದೆಷ್ಟು ಜನ ಸಮುದ್ರಯಾನ ಮಾಡಿದ ಧೀರ ನಾವಿಕರು, ನಿಜಕ್ಕೂ ತಲೆಯ ಮೇಲೆ ಹೊಡೆದಂತೆ ಕೊಟ್ಟಿರುವ ಮಾಹಿತಿಗಳು ಅನನ್ಯ. == ಸಮುದ್ರಯಾನದ ಸುಂದರ ಅನುಭವಗಳು == ಸಮುದ್ರಯಾನದ ಅರಿವು ಹೆಚ್ಚು ಹೆಚ್ಚಾದಂತೆ, ದಂತ-ಕಥೆಗಳು, ಮರಂಜನೆಯ ಸಾಧನಗಳಾದವು. ಮನುಷ್ಯನಿಗೆ ಈ ಅಗಾಧ-ವಿಶ್ವದ ಅರಿವು ಇಲ್ಲದಿದ್ದಾಗ, ವಿಜ್ಞಾನ ಇನ್ನೂ ಜನಜೀವನದಲ್ಲಿ ಪಾದಾರ್ಪಣೆ ಮಾಡದಿದ್ದಾಗ, ಕೆಲವೊಂದು ಆಗುಹೋಗುಗಳಬಗ್ಗೆ, ನಿರ್ಧರಿಸುವುದು, ಯಕ್ಷಪ್ರಶ್ನೆ ಯಾಗಿ ಬಹುಕಾಲದವರೆಗೆ ರೂಢಿಯಲ್ಲಿತ್ತು. ಆತಂಕ, ಗಾಬರಿ, ವಿಸ್ಮಯಗಳನ್ನು ತಂದಿತ್ತು. ದೂರದ ದೇಶಗಳಿಗೆ ಹೋಗಿ, ನೆಮ್ಮದಿಯಿಂದ ಜೀವನ ನಡೆಸುವ ಆಶೆ ಎಲ್ಲರದು. == ಯೂರೋಪಿಯನ್ ಸಮುದ್ರ ನಾವಿಕರ ಅನುಭವ == ಯೂರೋಪಿಯನ್ನರ ಅನುಭವದ ದಾಖಲೆಗಳಲ್ಲಿ, 'ಮರ್ಮೇಡ್ ಕಥಾ-ಪ್ರಸಂಗಗಳು,' ಬರುತ್ತವೆ. ಪೋರ್ಚುಗೀಸ್, ಡಚ್, ಸ್ಪಾನಿಷ್ ದೇಶದ ಜನಗಳು, ಹೊಸದೇಶ, ಹಾಗೂ ಭೂಭಾಗಗಳನ್ನು ಅರಸುತ್ತಾ, ಸಮುದ್ರದ ಮೇಲೆ ಯಾತ್ರೆ ಕೈಗೊಂಡರು. ನಂತರ ಬ್ರಿಟಿಷ್, ಫ್ರೆಂಚ್ ದೇಶ ಗಳೂ, ಈ ಅಭಿಯಾನವನ್ನು ಮುಂದುವರೆಸಿದವು. ಬಹಳ ಹಿಂದೆ ಪ್ಲಿನಿ, ಮಾರ್ಕೋಪೋಲೋ, ಅಲೆಕ್ಸಾಂಡರ್, ಮುಂತಾದವರು, ತಮ್ಮ ಹಡಗುಗಳಲ್ಲಿ ವಿಶ್ವವನ್ನು ಶೋಧಿಸಲು ಪ್ರಯತ್ನ ಮಾಡಿದ್ದರು. ಕೊಲಂಬಸ್, ಅಮೆರಿಕವನ್ನು, ಕಂಡು ಹಿಡಿದದ್ದೂ ಆಕಸ್ಮಿಕ. ಅವನು ಭಾರತವನ್ನು ಹುಡುಕಿ ಕೊಂಡು ಹೋಗಿದ್ದವನು ವೆಸ್ಟ್ ಇಂಡೀಸ್, ತಲುಪಿದನು. ಹೀಗೆ ಪ್ರಯಾಣಿಸುವಾಗ ಸುಗಮವಾಗಿ ಆದ ಯಾನವನ್ನು ದೇವರ ಆಶೀರ್ವಾದ ಅಥವಾ ತಮ್ಮ ’ನಸೀಬ್,’ ಎಂದು ಮಾತ್ರಾ ಹೇಳಬಹುದಾದ ಕಾಲವದು. ಹೆಚ್ಚಿನ ಮಾಹಿತಿಗಳು, ತಂತ್ರಜ್ಞಾನ ಯಾರಿಗೂ ಗೊತ್ತಿರಲಿಲ್ಲ. ಹಿಂದೆ ಯಾರೋ ಪ್ರಯಾಣಿಸಿದಾಗ ಆದ ಘಟನೆಗಳೇ ಮಾನದಂಡವಾಗಿದ್ದವು. == 'ಮತ್ಸ್ಯ-ಪುರುಷರ ಪ್ರಚಲಿತ ಕಥೆಗಳು' == ಹಾಗೆ ಪ್ರಚಲಿತವಾಗಿದ್ದ ಹಲವಾರು ಕಟ್ಟುಕಥೆಗಳಿಗೆ ಗ್ರಾಸವಾಗಿದ್ದದ್ದು, ’ಮರ್ಮೇಡ್,’ ಅಥವಾ, ’ಮತ್ಸಕನ್ಯೆಯ ವೃತ್ತಾಂತ,' ದ ತರಹ ಗಂಡಸೂ(ಮತ್ಸ್ಯಪುರುಷ) ಜನರನ್ನು ಮರುಳು ಮಾಡಿದ ಹಲವಾರು ದೃಷ್ಟಾಂತಗಳಿವೆ. ಸಮುದ್ರಯಾನ ಮಾಡುವ ನಾವಿಕರಿಗೆ ಈತರಹದ ಕಥೆಗಳಲ್ಲಿ ನಂಬಿಕೆ ಹೆಚ್ಚು. ಆಗಿನ ಕಾಲದಲ್ಲಿ ಹುಟ್ಟುಹಾಕಿ, ಗಾಳಿಶಕ್ತಿಯನ್ನೂ ಬಳಸಿ, ಭಗವಂತನ ನಂಬಿಕೆಯಿಂದಲೇ ಸಹಸ್ರಾರು ಮೈಲಿಗಳ ಕಡಲ ಯಾನ, ಒಂದು ವಿಸ್ಮಯ ಪ್ರಪಂಚವನ್ನೇ ಸೃಷ್ಟಿ ಮಾಡಿತ್ತು. ಪ್ರತಿ ನಾವಿಕನದೂ ಒಂದು ಅಲೌಖಿಕ ಅನುಭವ ! ಕಡಲಯಾನ ಮಾಡುವವರ ಸಂಖ್ಯೆ ಯೂ ತೀರಾ ಕಡಿಮೆ. ಗ್ರೀಕ್ ಕಥೆಗಳ ಪ್ರಭಾವ ಹೆಚ್ಚಾಗಿತ್ತು. ಬ್ಯಾಬಿಲೋನಿಯದ ಪೌರಾಣಿಕ ಕಥೆಗಳು, ಗ್ರೀಕರ, ಸೈರೆನ್ ಮತ್ತು ಟ್ರೈಟನ್ ಗಳು ಬ್ಯಾಬಿಲೋನಿಯದ ಮತ್ಸ್ಯದೇವತೆಗಳು ಅರ್ಧ ಮನುಷ್ಯ ಮೀನಿನ ದೇಹದ ಮರ್ಮೇಡ್ ಗಳ ಬಗ್ಗೆ ಸ್ವಲ್ಪಮಾಹಿತಿ ನೀಡುತ್ತವೆ. ಅತಿ ಕಡಿಮೆ ಕಡಲ ಸಂಪರ್ಕ ಹೊಂದಿದ್ದ ಭಾರತದ ನಾವಿಕರು, ಇವರನ್ನು ಅಪ್ಸರೆಯೆಂದು ಕರೆಯುತ್ತಿದ್ದರಂತೆ. == ಮಕ್ಕಳ ಆಕರ್ಷಣೆ ರೋಚಕ ಕಥೆಗಳು == ಈ ಕಾಲ್ಪನಿಕ ಕಥೆಗಳು ಬಹಳ ರೋಚಕ. ಸಾಗರದಲ್ಲಿ ನಾವಿಕರಿಗೆ ಕಂಡ ಕಾಲ್ಪನಿಕ, ಗ್ರೀಕ್ ಮತ್ತು ಬ್ಯಾಬಿಲೋನಿಯದ ಪೌರಾಣಿಕ ಕಥೆಗಳ ಆಧಾರದ ಮೇಲೆ ತಲೆ ಹಾಗೂ ದೇಹದ ಮೇಲ್ಭಾಗವೆಲ್ಲಾ ಸುಂದರ ಯುವ-ಸ್ತ್ರೀಯದು. ಸೊಂಟದಿಂದ ಕೆಳಭಾಗ, ಮೀನಿನ ಆಕಾರದ ದೇಹ. ಈ ಮರ್ಮೇಡ್ ಗಳು, ಸಮುದ್ರ, ಜಲಾಶಯ, ಸರೋವರ, ಅಥವಾ ಕಲ್ಲುಬಂಡೆಯ ಮೇಲೆ ಮೋಹಕ ಭಂಗಿಯಲ್ಲಿ ಮಲಗಿ, ಒಂದು ಕೈನಲ್ಲಿ ಕನ್ನಡಿಯನ್ನು ಹಿಡಿದು ನೋಡುತ್ತಾ, ಇನ್ನೊಂದು ಕೈನಲ್ಲಿ ತಲೆಗೂದಲನ್ನು ಓರಣವಾಗಿ ಬಾಚಿಕೊಳ್ಳುವ ಭಂಗಿ, ಸಾಮಾನ್ಯವಾಗಿತ್ತಂತೆ ! ಇವರು ಭವಿಷ್ಯವನ್ನೂ ನುಡಿಯಬಲ್ಲರು. ’ಸೀಲ್,’ ಗಳೂ ಅವರ ಜೊತೆಯಲ್ಲಿ ಬರುತ್ತಿದ್ದವಂತೆ. == 'ಮರ್ಮೇಡ್ ಗಳ' ಉಲ್ಲೇಖವಿರುವ ಪೌರಾಣಿಕ-ಕಥೆಗಳು == ಕೆಲವು ಪೌರಾಣಿಕ-ಕಥೆಗಳ ಪ್ರಕಾರ, ಈ ದಿವ್ಯ-ಸುಂದರ ಕನ್ಯೆಯರು, ಇಂಪಾದ ಹಾಡುಗಳನ್ನು ಹಾಡುತ್ತಾ , ತಮ್ಮ ಹಾವ-ಭಾವಗಳಿಂದ ಸಮುದ್ರ ಪಯಣಿಗರನ್ನು ಮರುಳುಗೊಳಿಸಿ, ದಾರಿ ತಪ್ಪಿಸಿ, ಸಮುದ್ರದ ಅಡಿಗೆ ಕರೆದೊಯ್ಯುತ್ತಾರಂತೆ. ಅಲ್ಲಿನ ತಮ್ಮ ನೆಲೆಯಲ್ಲಿ ಜನರನ್ನು ಬಂಧಿ ಗಳಾಗಿ ಇಡುತ್ತಾರಂತೆ. ಕೆಲವರಂತೂ ಈ ಕನ್ಯೆಯರನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು, ತಮ್ಮ ಅಳಿವು ಸನ್ನಿಹಿತವಾಯಿತೆಂದು, ತಮ್ಮ ದುರಾದೃಷ್ಟದ ಗಳಿಗೆಗಳು ಹತ್ತಿರವಾದವೆಂದು ನಿರ್ಧರಿಸುತ್ತಿದ್ದರು. == ಪ್ರಮುಖ-ಆಕರ್ಷಣೆಯ ಕೇಂದ್ರ ಬಿಂದು 'ಡಿಸ್ನಿ ಲ್ಯಾಂಡ್,' ನ ಮರ್ಮೇಡ್', == ಈಗ ನಾವು ಕಾಣುವ ’ಮರ್ಮೇಡ್’ ಯುವತಿಯರು, ತಮ್ಮ ಅದ್ಭುತ ರೂಪದಿಂದ ದಾರಿ ಹೋಕರ ಹೃದಯವನ್ನು ಸೂರೆಗೊಳ್ಳುತ್ತಾರೆ, ಆದರೆ ಅವರು ನಮ್ಮನ್ನು ಸರ್ವನಾಶ ಮಾಡುವ ಅಪಾಯವಿಲ್ಲ. ಅವರೊಡನೆ ಕುಳಿತು ಫೋಟೊ ತೆಗೆಸಿಕೊಳ್ಳಬಹುದು. ’ಆಟೋಗ್ರಾಫ್,’ ಪಡೆಯ ಬಹುದು. ’ ಡಿಸ್ನಿಲ್ಯಾಂಡ್,’ ನಂತಹ ಒಂದು ಪ್ರಖ್ಯಾತ-ಪ್ರದೇಶದ ಶೋಭೆ ಹೆಚ್ಚಿಸಲು ಅವರು ಅಗತ್ಯ ಕೂಡ. == 'ಮರ್ಮೇಡ್,'ಗುಹೆಯಾಕಾರದ ಕಲ್ಲಿನ ಮನೆಯೊಳಗೆ, == 'ಡಿಸ್ನಿ ಲ್ಯಾಂಡ್' ನಲ್ಲಿ ಗುಹೆಯಾಕಾರದ ಕಲ್ಲಿನ ಮನೆಯೊಳಗೆ, ಇಂದಿಗೂ ಕಾಣಿಸುವ 'ಮರ್ಮೇಡ್', ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾಳೆ. ಪಕ್ಕದಲ್ಲೇ ಡಿಸ್ನಿಲ್ಯಾಂಡ್ ನ, ಅಧಿಕೃತ-ಫೋಟೋಗ್ರಾಫರ್ ಇದ್ದು, ಮೊದಲೇ ನಿರ್ಣಯವಾಗಿರುವ ವಿಶೇಷ-ಭಂಗಿಗಳಲ್ಲಿ ಆಕೆಯ ಜೊತೆ ಕೂಡಲು ಸೂಚಿಸಿ, ಫೋಟೊ ತೆಗೆಯುತ್ತಾನೆ. ಆತನಲ್ಲದೆ ಬೇರೆ ಯಾರೂ ಫೋಟೋ ತೆಗೆಯುವಂತಿಲ್ಲ. ಬೆಳಗಿನಿಂದ ೫-೬ ಕ್ಯೂಗಳಲ್ಲಿ ಗಂಟೆಗಟ್ಟಲೆ ನಿಂತು ಸುಸ್ತಾಗಿದ್ದರೂ, ಪುನಃ ಕ್ಯೂನಲ್ಲಿ ನಿಂತು, ಆ 'ಮತ್ಸ್ಯಕನ್ಯೆಯ 'ಆಟೋಗ್ರಾಫ್,’ ಪಡೆಯುವ ರಸಿಕರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. == ಉಲ್ಲೇಖಗಳು ==